Connect with us

ODI Cricket

India vs New Zealand 2023 : ಭಾರತಕ್ಕೆ 274 ರನ್‌ಗಳ ಗುರಿ ನೀಡಿದ ಕಿವೀಸ್ ಪಡೆ

Published

on

India vs New Zealand 2023

ನ್ಯೂಜಿಲ್ಯಾಂಡ್ (India vs New Zealand 2023) ವಿರುದ್ಧ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್​ ಶರ್ಮ ಅವರು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಟಾಸ್ ಸೋತ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿ ಭಾರತ ತಂಡಕ್ಕೆ 274 ರನ್‌ಗಳ ಗುರಿಯನ್ನು ನೀಡಿದೆ.

India vs New Zealand 2023 Highlights

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್​ ತಂಡ ನಿಗದಿತ 50 ಓವರ್ ನಲ್ಲಿ 273 ರನ್​ಗೆ ಆಲ್​ಔಟ್​, ಭಾರತಕ್ಕೆ 274 ರನ್ ಗೆಲುವಿನ ಗುರಿ.ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ ಮತ್ತು ಭಾರತದ ಮೊಹಮ್ಮದ್ ಶಮಿ ಧರ್ಮಶಾಲಾದಲ್ಲಿ ಪ್ರಾಬಲ್ಯ ತೋರಿಸಿದ್ದಾರೆ.

ವಿಶ್ವಕಪ್ 2023 ಭಾರತ vs ನ್ಯೂಜಿಲೆಂಡ್ ಪಂದ್ಯದ ಪಿಚ್ ವರದಿ

ಈ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್
ಎನಿಸಿಕೊಂಡರು. ಮೊಹಮ್ಮದ್ ಶಮಿ 10 ಓವರ್ ಗಳಲ್ಲಿ 54 ರನ್ ನೀಡಿ 5 ವಿಕೆಟ್ ಪಡೆದರು. ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 274 ರನ್ ಗಳಿಸಿತು.

ಕೊನೆಯ ಓವರ್‌ಗಳಲ್ಲಿ ಮೊಹಮ್ಮದ್ ಶಮಿ ನಿರಂತರವಾಗಿ ವಿಕೆಟ್ ಕಬಳಿಸಿ ನ್ಯೂಜಿಲೆಂಡ್ ದೊಡ್ಡ ಸ್ಕೋರ್ ಮಾಡದಂತೆ ಮಾಡಿದರು. ನ್ಯೂಜಿಲೆಂಡ್ ಪರ ಡ್ಯಾರಿಲ್ ಮಿಚೆಲ್ 127 ಎಸೆತಗಳಲ್ಲಿ 130 ರನ್ ಗಳಿಸಿದರು. ಈ ವೇಳೆ ಅವರ ಬ್ಯಾಟ್‌ನಿಂದ 9 ಬೌಂಡರಿ ಹಾಗೂ 5 ಸಿಕ್ಸರ್‌ಗಳು ಬಂದವು. ಇದಲ್ಲದೇ ರಚಿನ್ ರವೀಂದ್ರ 75 ರನ್ ಗಳಿಸಿದರು.

Advertisement

Trending