Connect with us

ODI Cricket

World Cup 2023 India vs New Zealand Highlights : ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಎರಡು ದಶಕದ ನಂತರ ಭರ್ಜರಿ ಗೆಲುವು

Published

on

World Cup 2023 India vs New Zealand Highlights

India vs New Zealand Highlights: ವಿರಾಟ್ ಕೊಹ್ಲಿ ಬ್ಯಾಟಿಂಗ್ ಹಾಗೂ ಶಮಿ ಬೆಂಕಿ ಬೌಲಿಂಗ್‌ ನೆರವಿನಿಂದ ನ್ಯೂಜಿಲೆಂಡ್‌ ವಿರುದ್ಧ ಭಾರತ 274 ರನ್‌ಗಳಿಂದ ಜಯಗಳಿಸಿತು. ಆ ಮೂಲಕ ಭಾರತ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

India vs New Zealand Highlights World Cup 2023

ಧರ್ಮಶಾಲಾದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಗಳ ಗೆಲುವು ಸಾಧಿಸಿತು. ಇದರಲ್ಲಿ ಭಾರತಕ್ಕೆ ಎರಡು ದಶಕಗಳ ನಂತರ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿದೆ.
ಇದರಲ್ಲಿ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಿಂದ 104 ಎಸೆತಗಳಲ್ಲಿ, 95 ರನ್ , ಮತ್ತು ಮೊಹಮ್ಮದ್ ಶಮಿ ಬೌಲಿಂಗ್ ದಾಳಿಯಿಂದ 5 ವಿಕೆಟ್ ನಿಂದಾಗಿ ಭಾರತಕ್ಕೆ ಗೆಲುವು ಸುಲಭವಾಗಿದೆ.

ವಿಶ್ವಕಪ್ 2023 ಭಾರತದ ಮುಂಬರುವ ಪಂದ್ಯಗಳ ವೇಳಾಪಟ್ಟಿ!

ಹಿಮಾಚಲ ಪ್ರದೇಶ ಧರ್ಮಶಾಲಾದ ಹೆಚ್‌ಪಿಸಿಎ ಕ್ರೀಡಾಂಗಣದಲ್ಲಿ ಇಂದು ನಡೆದ ವಿಶ್ವಕಪ್‌ 2023 ಟೂರ್ನಿಯ 21ನೇ ಪಂದ್ಯದಲ್ಲಿ ಭಾರತ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡಿತು. ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌ ನಿಗದಿತ 50 ಓವರ್ ನಲ್ಲಿ 273 ರನ್‌ಗಳಿಸಿ ಆಲೌಟ್‌ ಆಗಿ, ಭಾರತಕ್ಕೆ 274 ರನ್‌ ಟಾರ್ಗೆಟ್‌ ನೀಡಿತು. ಗುರಿ ಬೆನ್ನತ್ತಿದ ಭಾರತ, ಉತ್ತಮ ಬ್ಯಾಟಿಂಗ್‌ ಪ್ರದರ್ಶನದೊಂದಿಗೆ 48 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 274 ರನ್‌ ಗಳಿಸಿ ಗೆಲುವು ದಾಖಲಿಸಿತು.

ಭಾರತದ ಪರ ಬೌಲಿಂಗ್ ನಲ್ಲಿ ಮಹಮ್ಮದ್‌ ಶಮಿ 5 ವಿಕೆಟ್‌ ಕಬಳಿಸಿ ಮಿಂಚಿದರು. ಜಸ್ಪ್ರಿತ್‌ ಬೂಮ್ರಾ, ಮಹಮ್ಮದ್‌ ಸಿರಾಜ್‌ ತಲಾ 1 ವಿಕೆಟ್ ಪಡೆದರು, ಕುಲದೀಪ್‌ ಯಾದವ್‌ 2 ವಿಕೆಟ್‌ ಕಂಬಳಿಸಿದ್ದರು.

Advertisement

Trending