Connect with us

ODI Cricket

India vs New Zealand : ಭಾರತ ಮತ್ತು ನ್ಯೂಜಿಲೆಂಡ, ಪಂದ್ಯದ 21 ರ ಸ್ಥಳ, ತಂಡದ ಸುದ್ದಿ, ಲೈವ್ ಸ್ಟ್ರೀಮಿಂಗ್.

Published

on

India vs New Zealand

India vs New Zealand: ಐಸಿಸಿ ವಿಶ್ವಕಪ್ 2023 ರ 21ನೇ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಖಾಮುಖಿ ಆಗಲಿದೆ. ಈ ಪಂದ್ಯವು ಹಿಮಾಚಲ ಪ್ರದೇಶದ ಧರ್ಮಶಾಲಾದ HPCA ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ಮೊದಲ ನಾಲ್ಕು ಪಂದ್ಯಗಳಲ್ಲಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಸತತ ನಾಲ್ಕು ಗೆಲುವು ಸಾಧಿಸಿದೆ. ಭಾರತ ಐದನೇ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಹಿಮಾಚಲ ಪ್ರದೇಶದ ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ ನಡೆಯಲಿದೆ. ಉಭಯ ತಂಡಗಳು ಗೆಲುವಿನ ಸರಣಿಯನ್ನು ಮುಂದುವರಿಸಲು ಸಜ್ಜಾಗಿವೆ.

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಪಾಯಿಂಟ್ ಟೇಬಲ್ ನಲ್ಲಿ ನೋಡುವುದಾದರೆ. ನ್ಯೂಜಿಲೆಂಡ್ ನಾಲ್ಕು ಪಂದ್ಯಗಳಲ್ಲಿ ನಾಲ್ಕು ಗೆಲುವು ಸಾಧಿಸಿ, 8 ಅಂಕಗಳೊಂದಿಗೆ, +1.923 ರನ್ ರೇಟ್ ನೊಂದಿಗೆ ಅಗ್ರಸ್ಥಾನದಲ್ಲಿದೆ. ಭಾರತವು ಸಹ ನಾಲ್ಕು ಪಂದ್ಯಗಳಲ್ಲಿ ನಾಲ್ಕು ಗೆಲುವು ಸಾಧಿಸುವ ಮೂಲಕ, 8 ಅಂಕಗಳನ್ನು ಹಾಗೂ +1.659 ರನ್ ರೇಟ್ ನೊಂದಿಗೆ ಎರಡನೇ ಸ್ಥಾನದಲ್ಲಿ.

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಏಕದಿನ ಮಾದರಿಯಲ್ಲಿ ಒಟ್ಟು ಮುಖಾಮುಖಿಗಳು 62 ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ 22 ಪಂದ್ಯಗಳನ್ನು ಗೆದ್ದಿದೆ. ಹಾಗೂ ನ್ಯೂಜಿಲೆಂಡ್ 13 ಪಂದ್ಯಗಳನ್ನು ಗೆದ್ದಿದೆ. ಉಭಯ ತಂಡಗಳ ನಡುವೆ 27 ಪಂದ್ಯಗಳು ಡ್ರಾ ನೊಂದಿಗೆ ಅಂತ್ಯಗೊಂಡಿವೆ.

India vs New Zealand ಆಡಿದ ಒಟ್ಟು ಪಂದ್ಯಗಳು: 62

ಭಾರತದ ಗೆಲುವು: 22
ನ್ಯೂಜಿಲೆಂಡ್ ಗೆಲುವು: 13
ಡ್ರಾದಲ್ಲಿ ಕೊನೆಗೊಂಡ ಪಂದ್ಯಗಳು: 27

ವಿಶ್ವಕಪ್ 2023 ಭಾರತದ ಮುಂಬರುವ ಪಂದ್ಯಗಳ ವೇಳಾಪಟ್ಟಿ!

India vs New Zealand ICC World Cup 2023 ಸಂಭಾವ್ಯ ಪ್ಲೇಯಿಂಗ್ XI
ಭಾರತ (IND): ರೋಹಿತ್ ಶರ್ಮಾ (ಸಿ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (wk), ಸೂರ್ಯಕುಮಾರ್ ಯಾದವ್ / ಇಶಾನ್ ಕಿಶನ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ / ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ನ್ಯೂಜಿಲೆಂಡ್ (NZ): ಡೆವೊನ್ ಕಾನ್ವೇ, ರಚಿನ್ ರವೀಂದ್ರ, ವಿಲ್ ಯಂಗ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ಸಿ)(ವಾಕ್), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಇಶ್ ಸೋಧಿ, ಟ್ರೆಂಟ್ ಬೌಲ್ಟ್

IND vs NZ : ಪಂದ್ಯದ ವಿವರಗಳು
ಪಂದ್ಯ: ಭಾರತ vs ನ್ಯೂಜಿಲೆಂಡ್, ಪಂದ್ಯ 21

ಸ್ಥಳ: HPCA ಸ್ಟೇಡಿಯಂ, ಧರ್ಮಶಾಲಾ, ಹಿಮಾಚಲ ಪ್ರದೇಶ

ದಿನಾಂಕ ಮತ್ತು ಸಮಯ: ಭಾನುವಾರ, ಅಕ್ಟೋಬರ್ 22, ಮಧ್ಯಾಹ್ನ 2:00 IST

ಟಿವಿಯಲ್ಲಿ IND vs NZ ವೀಕ್ಷಿಸುವುದು ಹೇಗೆ?
ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿದೆ.
IND vs NZ ಪಂದ್ಯ ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

Advertisement

Trending